Cashew Crop
ನ0ಬಿದವರಿಗೆ ಇ0ಬುಕೊಡುವ ಹಾದಿಯಲ್ಲಿ ಗೇರುಬೀಜದ ಬೆಳೆ


ಕಾಡು, ಗುಡ್ಡ ಅಥವಾ ಹಾಡಿ ಬೆಳೆಯಾಗಿ ಸಾಮಾಜಿಕ ಔದಾಸಿನ್ಯಗೊಳಗಾಗಿದ್ದ ಗೇರು ಬೆಳೆಯು ಇದೀಗ ಪ್ರಮುಖ ವಾಣಿಜ್ಯ ಬೆಳೆಯಾಗಿ ರೂಪುಗೊಳ್ಳುವತ್ತ ಹೆಜ್ಜೆ ಇಡುತ್ತಿರುವುದು ರೈತಾಪಿ ಜನರಿಗೆ ಸಂತಸ ತರುವ ವಿಷಯ. ಮಣ್ಣು ಸವಕಳಿಗಾಗಿ ಪೆÇೀರ್ಚುಗೀಸರಿಂದ ಮೊದಲ ಬಾರಿಗೆ ಭಾರತದ ಬಂಜರು ಭೂಮಿಯಲ್ಲಿ ಬೆಳೆಸಲ್ಪಟ್ಟ ಗೇರುಬೆಳೆ ಕರಾವಳಿಯುದ್ದಕ್ಕೂ ಅತ್ಯಂತ ಪರಿಚಿತ ಬೆಳೆ. ಹೆಚ್ಚು ಮುತುವರ್ಜಿ ನಿರೀಕ್ಷಿಸದ ಆದರೆ ಅಲ್ಪ ಪೆÇೀಷಣೆ ಮಾತ್ರಕ್ಕೆ ಉದಾರವಾಗಿ ಸ್ಪಂದಿಸುವ ಗೇರು ಕೃಷಿಯು, ಇದೀಗ ಮಲೆನಾಡು ದಾಟಿ ಘಟ್ಟ ಹತ್ತಿ ಬಯಲು ಪ್ರದೇಶಕ್ಕೂ ಸೈ ಎನಿಸಿರುವುದು ಗೇರು ಉದ್ಯಮಕ್ಕೆ ವರದಾನವಾಗಿದೆ. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಮತ್ತು ಇದರ ಅಂಗ ಸಂಸ್ಥೆ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳು ಈ ಹಿಂದಿನಿಂದಲೂ ಗೇರು ಕೃಷಿಯಲ್ಲಿ ತಳಿ ಅಭಿವೃಧ್ಧಿ, ಬೆಳೆ, ಪೆÇಷಕಾಂಶ, ರೋಗ ಕೀಟಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ಸಂಶೋಧನೆ ಮತ್ತು ವಿಸ್ತರಣೆಗಳ ಬಗ್ಗೆ ತನ್ನನ್ನು ತೊಡಗಿಸಿ ಕೊಂಡಿರುತ್ತದೆ ಮಾತ್ರವಲ್ಲ ಈ ಎರಡೂ ಕೇಂದ್ರಗಳಿಂದ ಉತ್ತಮ ಗುಣಮಟ್ಟದ ಕಸಿ ಗಿಡಗಳನ್ನೂ ಅಭಿವೃದ್ಧಿ ಪಡಿಸಿ ರೈತರಿಗೆ ಸರಬರಾಜು ಮಾಡುತ್ತಾ ಬಂದಿದೆ. ಹಾಗೆಯೇ ವಿವಿಧ ಪ್ರದೇಶಗಳಲ್ಲಿ ಮುಂಚೂಣಿ ಪ್ರಾತ್ಯಕ್ಷತೆಗಳ ಮೂಲಕ ಕರ್ನಾಟಕದ ಉದ್ದಗಲಕ್ಕೂ ಪರಿಚಯಿಸುವ ಕಾರ್ಯದಲ್ಲೂ ಮಹತ್ತರ ಪಾತ್ರ ವಹಿಸಿದೆ.

ಈ ಎರಡೂ ಕೇಂದ್ರಗಳ ಪ್ರಸ್ತುತ ವರ್ಷದ ಫಸಲಿನ ಹರಾಜಿನಲ್ಲಿ ಉತ್ತಮ ಶ್ರೇಣಿಯ ಗೇರು ಬೀಜವು ಕ್ರಮವಾಗಿ ಕಿಲೋ ವೊಂದಕ್ಕೆ ದಾಖಲೆ ದರ ರೂಪಾಯಿ 169 ಕ್ಕೆ ಮತ್ತು ರೂ. 151.77 ಗಳಿಗೆ ಮಾರಾಟವಾಗಿರುವುದು ಬೆಳೆಗಾರರ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯೇ ಸರಿ. ನಮ್ಮ ಕೇಂದ್ರವು ಗೇರು ಬೆಳೆಯ ಈ ಬೆಳವಣಿಗೆಯನ್ನು ರೈತರೊಂದಿಗೆ ಹಂಚಿಕೊಳ್ಳುವ ಮುಖ್ಯ ಉದ್ದೇಶ, ಗೇರು ಬೆಳೆಯ ಮುಂದಿನ ಉಜ್ವಲ ಭವಿಷ್ಯದ ಬಗೆಗಿನ ತಿಳುವಳಿಕೆ ಬೆಳೆಗಾರರ ಗಮನಕ್ಕೆ ತರುವುದು ಆಗಿದೆ. ಆದ್ದರಿಂದ ನೀವೂ ಸಹ ಈ ದರವನ್ನು ಬಯಸುವುದೇ ಆದಲ್ಲಿ ಈ ಕೆಳಗಿನ ಸರಳ ನಿಯಮಗಳನ್ನು ತಪ್ಪದೆ ಅಳವಡಿಸಿ ಹೆಚ್ಚಿನ ಧಾರಣೆಯನ್ನು ಪಡೆಯಿರಿ.

1. ಬೇಸಿಗೆಯಲ್ಲಿ ಹೂಬಿಟ್ಟ ನಂತರ ಕಾಯಿ ಕಟ್ಟುವ ಅವಧಿಯಲ್ಲಿ ಅನುಕೂಲವಿದ್ದಲ್ಲ್ಲಿ ಎರಡು ವಾರಕೊಮ್ಮೆ ನೀರಾವರಿಯನ್ನು ಒದಗಿಸಿ
2. ಟೀ ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಪಾಲಿಸಿ
3. ಅಂತರ್ ಬೆಳೆಯಾಗಿ ಕರಿಮೆಣಸು, ಅರಿಶಿಣ ಅಥವಾ ಸುವರ್ಣ ಗೆಡ್ಡೆ ಬೆಳೆಯುವುದರಿಂದ ಕಳೆ ನಿಯಂತ್ರಣದ ಜೊತೆಗೆ ಆದಾಯವೂ ಹೆಚ್ಚುತ್ತದೆ.
4. ಉದುರಿದ ತರಗೆಲೆಗಳು ಮಣ್ಣಿನಲ್ಲಿ ತೇವಾಂಶವನ್ನು ಕಾಯ್ದುಕೊಳ್ಳುವುದರಿಂದ ಇಳುವರಿ ಹೆಚ್ಚುತ್ತದೆ.
5. ಉದುರಿದ ಹಣ್ಣುಗಳಿಂದ ಮಾತ್ರ ಬೀಜಗಳನ್ನು ಆರಿಸಿ
6. ಹಣ್ಣುಗಳನ್ನು ತಂಪು ಪಾನಿಯಗಳಿಗೂ ಬಳಸಿ ನಿಮ್ಮ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳಿ.
7. ಆರಿಸಿದ ಬೀಜಗಳನ್ನು ಸರಿಯಾಗಿ ಒಣಗಿಸಿ
8. ಒಣಗಿದ ಬೀಜಗಳನ್ನು ಒಣ ಗೋಣಿ ಚೀಲಗಳಲ್ಲೇ ಶೇಖರಿಸಿ.
9. ದಾಸ್ತಾನು ಕೊಠಡಿಗಳಲ್ಲಿ ಮಳೆ ನೀರು ಸೊರದಂತೆ, ತೇವಯುಕ್ತ ಗಾಳಿ ಆಡದಂತೆ ಭದ್ರಪಡಿಸಿ
10. ದಾಸ್ತಾನು ಚೀಲಗಳು ನೆಲ ಅಥವಾ ಗೋಡೆಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಿ
11. ಮಾರಾಟಕ್ಕೆ ಮುನ್ನ ಗೇರು ಬೀಜಗಳನ್ನು ಆಯ್ದು ಶ್ರೇಣಿಕರಿಸಿ
12. ಮಾರುಕಟ್ಟೆಯ ದರದ ಏಳುಬೀಳುಗಳನ್ನು ಗಮನಿಸುತ್ತಾ ಇರಿ.
13. ಆ ವರ್ಷದ ಫಸಲನ್ನು ಅದೇ ವರ್ಷ ಮಾರಾಟ ಮಾಡಿ
14. ಫಸಲಿಗೆ ಸರಿಯಾಗಿ ಹರಾಜು ಅಥವಾ ಮಾರಾಟಕ್ಕೆ ತೊಡಗಿಸಿಕೊಳ್ಳಿ.
15. ಉದ್ಯಮಗಳಿಗೆ ಹೆಚ್ಚು ಪ್ರಮಾಣದ ಗೇರು ಬೀಜಗಳ ಅವಶ್ಯಕತೆಯಿರುವುದರಿಂದ ಹೆಚ್ಚು ಫಸಲಿನ ಬೆಳೆಗಾರರು ಗೇರು ಬೀಜದ ಉದ್ಯಮಿಗಳನ್ನು ನೇರವಾಗಿ ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಜ್ಞಾನಿಗಳನ್ನು ಸಂಪರ್ಕಿಸಿರಿ


ಡಾ. ಹನುಮಂತಪ್ಪ ಎಂ.

ಸಹ ಸಂಶೋಧನಾ ನಿರ್ದೇಶಕರು,

ವಲಯ ಕೃಷಿ ಮತ್ತು ತೋಟಗಾರಿಕಾ

ಸಂಶೋಧನಾ ಕೇಂದ್ರ,

ಬ್ರಹ್ಮಾವರ - 576 213

ಮೊಬೈಲ್ ಸಂಖ್ಯೆ: 9480838965

ಡಾ. ಧನಂಜಯ ಬಿ..

ಹಿರಿಯ ವಿಜ್ಞಾನಿಗಳು

ಕೃಷಿ ವಿಜ್ಞಾನ ಕೇಂದ್ರ,

ಬ್ರಹ್ಮಾವರ – 576 213

ಮೊಬೈಲ್ ಸಂಖ್ಯೆ: 9448950250

ಡಾ. ಕೆ.ವಿ. ಸುಧೀರ್ ಕಾಮತ್

ಸಹ ಪ್ರಾಧ್ಯಾಪಕರು (ಬೇಸಾಯಶಾಸ್ತ್ರ)/ ಹಿರಿಯ ಕ್ಷೇತ್ರಾಧೀಕ್ಷಕರು

ವಲಯ ಕೃಷಿ ಮತ್ತು ತೋಟಗಾರಿಕಾ

ಸಂಶೋಧನಾ ಕೇಂದ್ರ,

ಬ್ರಹ್ಮಾವರ - 576 213

ಮೊಬೈಲ್ ಸಂಖ್ಯೆ: 9480838982